gururayaru

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ

Articles, Authors, Deepika Pandurangi No Comment

booksPre K G  ಗೆ ಹೋಗೋ ಮಗುವಿಂದ ಹಿಡಿದು ನೆರೆತ ಕೂದಲು, ಬೊಚ್ಚು ಬಾಯಿ, ಮಬ್ಬು ದೃಷ್ಟಿ, ನಡುಗೋ ಕೈ, ಸುಕ್ಕುಗಟ್ಟಿದ ದೇಹ, ನಿತ್ರಾಣ ಅಸ್ತಿತ್ವದ  ವೃದ್ಧರವರೆಗಿನ ಎಲ್ಲರ ಆಪ್ತಮಿತ್ರ ಪುಸ್ತಕ. schoolಗೆ ಹೋಗೋ ಮಕ್ಕಳಿಗೆ ಕೆಲವೊಮ್ಮೆ ಬೇಡದಿರೋ ಹೊರೆ ಅನ್ಸಿದ್ರೆ, ಮಾತಿಗೆ ಯಾರು ಸಿಗದೇ ಮೌನವಾಗಿರುವಾಗ  ಒಳ್ಳೆ friend guide, philosopher ಆಗೋದು ಇದೇ  books.

ಕೆಲವೊಮ್ಮೆ book reading ಮತ್ತು  cricket  ಇವೆರಡರಲ್ಲಿ ತುಂಬಾ ಹೊಂದಿಕೆ ಇದೆ ಅನ್ಸತ್ತೆ . ಯಾಕೆ ಅಂತೀರಾ,…. ಕೆಲವು delivery ಮಾತ್ರ connect ಆಗತ್ತೆ. ಇನ್ನು  ಕೆಲವು wide delivery ಆಗತ್ತೆ . ಮತ್ತೆ ಕೆಲವು six  four  runs ನ ತಂದುಕೊಟ್ರೆ , ಕೆಲವೊಂದು  LBW ಅಥವಾ out  ಮಾಡ್ಸತ್ತೆ . ಅದೇ ಥರಾ  ಒಬೊಬ್ಬ ಓದುಗನ ಪಾಲಿಗೆ ಒಂದೊಂದು books ಒಂದೊಂದು ಥರಾ . ಕೆಲವು ಮನಸ್ಸಿಗೆ ತುಂಬಾ ಹಿಡಿಸಿದ್ರೆ ಕೆಲವು ಬುದ್ಧಿಗೆ ಎಟುಕಲ್ಲ. ಇನ್ನು ಕೆಲವು ಗೋಜಲು ಅನ್ನಿಸದ್ರೆ ಮತ್ತೆ ಕೆಲವು ಮತ್ತೆ ಮತ್ತೆ ಓದಿಸಿಕೊಳ್ಳತ್ತೆ . ofcourse  ಇದರಲ್ಲಿ  ಬುಕ್ ನ articulation ಪಾತ್ರದ  ಬಗ್ಗೆ ಹೇಳೋದ್ರಲ್ಲಿ ಅರ್ಥ ಇಲ್ಲ. ಆದ್ರೆ articulation ಹೊರಹಾಕುವ ಒಳಾರ್ಥ ಮಹತ್ವವಾದದು.

ಪುಸ್ತಕ ಕೈಲಿ ಹಿಡಿದು ಪಟ ಪಟ ಪುಟ ತಿರಗಸ್ತ ಹೋದಂತೆ ಕಣ್ಣಿಗೆ ಬೀಳೋದು ಬೇರೆ ಬೇರೆ ಆಕೃತಿಯ ಲಕ್ಷಣ ವಿಲಕ್ಷಣ ಅಕ್ಷರಗಳ ಸಾಲು ಮಣಿಗಳು….. ಅಕ್ಷರ ಕುಂಜದ ಪದಗಳು…. ಪದಗಳ ರತ್ನಮಾಲೆ ವಾಕ್ಯಗಳು….. ವಾಕ್ಯದೊಳಗೆ ಅಡಗಿ ಕುಳಿತ ಅನಂತ ಅಗಾಧ ಗಾಡಾರ್ಥಗಳು  ಗೂಡಾರ್ಥಗಳು .

ಎಲ್ಲಿದೆ ಇದರ ಮೂಲ? ಅಡಗಿರುವ ಅತ್ಮದಲ್ಲೂ… ಒಳಗಿರುವ ಚೇತನದಲ್ಲೋ…. ಓಡುವ  ಬುದ್ಧಿಯಲ್ಲೂ ….. ನಾಟುವ ಮನದಲ್ಲೋ… ?ಎಲ್ಲಿ … ಏನು … ಎತ್ತ?

ಅಗೋಚರ ಉತ್ತರಕ್ಕೆ ಗೋಚರಿಸುವ ಪ್ರಶ್ನೆ ಇದು.

ಓದುತ್ತಾ  ಕೂತಂತೆ  ನಕ್ಕಿದೆಷ್ಟೋ ಅತ್ತದೆಷ್ಟೋ. ಹುಬ್ಬೇರಿಸಿದ್ದು ಉಂಟು ಕಣ್ಣೀರಿಟ್ಟಿದು ಉಂಟು. ಒಂದು unusual journey ಅನ್ಕೋಬಹುದು.

ವೈವಿಧ್ಯ ರಸಾನುಭೂತಿಯ experienceಗೆ ಒಳಪಟ್ಟು ಅತೀತ ಆನಂದ ಅನುಭವಿಸ್ತಿವಿ. ಈ transcendental experienceಗೆ ಆ ಪುಸ್ತಕದಲ್ಲಿ ಇದ್ದ ಯಾವ ಅಂಶ ಕಾರಣ?

ಬರೆವ ಕೈಯಲ್ಲಿರುವ ಜಾದುವೋ.. ಓದುವ ಕಣ್ಣಿಗಿರುವ ಮಾಯೆಯೋ… ಒಟ್ಟಿನಲ್ಲಿ ಓದುಗನನ್ನ ತನ್ನೊಂದಿಗೆ ಸೆಳೆದೊಯ್ಯುವ ಇದರ ಸಾಮಥ್ಯಕ್ಕೆ hats  off  ಎನ್ನಲೇಬೇಕು.

ಒಂದಂತೂ ನಿಜ! ಕವನ ಬರೆಯುವ ಕೈಯಿರಲಿ, ಸಾಹಿತ್ಯ ಅರಳಿಸುವ ಕಾರವಿರಲಿ.. ಅದೇನೇ ಆದರೂ ಭಾವನೆಗೆ ಮೂರ್ತಿರೂಪಕೊಟ್ಟು ಆಕೃತಿಯಾಗಿ ಮೂಡಿಸುವ ಓ ಲೇಖನಿಯೇ!!! ಭಾವಕ್ಕೆ ಬಣ್ಣ ತುಂಬುವ ಓ ಶಾಯಿಯೇ!!! ನಿನಗಿದೋ ನನ್ನದೊಂದು ಸಲಾಮ್ .

ಅಕ್ಷರ, ಭಾವ, ಓದುಗ ….. ಯಾವುದರಿಂದ ಯಾವುದು? ಯಾರಿಂದ ಯಾವುದು? ಪುಸ್ತಕ ಅನ್ನೋ ಮಾಯಾ ಪ್ರಪಂಚದಲ್ಲಿ ರಸಾನುಭೂತಿ ಅಡಗಿರುವುದೆಲ್ಲೋ!

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ“. 

ಲೇಖಕಿ :ದೀಪಿಕಾ ಪಾಂಡುರಂಗಿ 

 

 

 

Related Posts

Leave a Reply

shares