gururayaru

Mahalaya Amavasya in Kannada-ಮಹಾಲಯ ಅಮಾವಾಸ್ಯೆ

Articles, Hindu Festivals, Navaratri No Comment

ಸರ್ವಪಿತೃ ಅಮಾವಾಸ್ಯೆ / ಮಹಾಲಯ ಅಮಾವಾಸ್ಯೆ

mahalaya amavasya in kannada, ಮಹಾಲಯ ಅಮಾವಾಸ್ಯೆ ,

*ಸರ್ವಪಿತೃ ಅಮಾವಾಸ್ಯೆ :* ಚಂದ್ರನು ತನ್ನ ಹದಿನಾರು ಕಲೆಗಳನ್ನು ದೇವತೆಗಳಿಗೆ ಹಂಚಿ ಅಮವಾಸ್ಯೆಯಂದು ಸೂರ್ಯನ *ಅಮಾ*ವೆಂಬ ಕಿರಣದಲ್ಲಿ ವಾಸ ಮಾಡುವನು.ಆದ್ದರಿಂದ *ಪಿತೃ*ಗಳಿಗೆ ಒಂದು ಅದರಲ್ಲೂ *ಅಮಾವಾಸ್ಯೆಯು ಪಿತೃಗಳಿಗೆ ಮಧ್ಯಾಹ್ನ ಕಾಲ*ವೆನಿಸಿದ್ದು.

ನೀರು-ಆಹಾರವನ್ನು ಬಯಸುವ ಕಾಲವಾಗಿದೆ.*ಪೌರ್ಣೀಮೆ*ಯು ರಾತ್ರಿಕಾಲವಾಗಿದೆ.ಆದ್ದರಿಂದಲೇ *ಪೌರ್ಣೀಮೆ*ಯಲ್ಲಿ *ಪಿಂಡಪ್ರದಾನ*ವಿಲ್ಲ *ಅಮವಾಸ್ಯೆ*ಯಂದು *ಪಿತೃಗಳ ಮೇಲೆ ಸೂರ್ಯನು ಕೆಳಗೆ ಚಂದ್ರನೂ ಇರುವರು.ಸೂರ್ಯನ ಕಿರಣಗಳಿಂದ ಮಧ್ಯಾಹ್ನದಲ್ಲಿ ನೊಂದ ಇವರಿಗೆ ತಿಲತರ್ಪಣ*ವು ವಿಹಿತವಾಗಿದೆ.

*ಮಹಾಲಯ ಪಿತೃ ಅಮಾವಾಸ್ಯೆ :* pitru paksha in kannada

ಬೇರೆ *ಅಮವಾಸ್ಯೆ*ಗಿಂತಲೂ *ಅಪರ ಪಕ್ಷದ ಅಮಾವಾಸ್ಯೆ*ಯು ಶ್ರೇಷ್ಠವೆನಿಸಿದೆ.ಯಾರು ಯಾರು ಮೃತರಾಗಿವರೋ ಅವರೆಲ್ಲರನ್ನೂ ಸ್ಮರಿಸುವ ದಿನಾ.ಆದ್ದರಿಂದಲೇ*”ಮಹಾಲಯ”*ವೆನಿಸಿದೆ.*”ಮಹಾನ್ ಲಯಃ ಯತ್ರ” *ಎಂಬಂತೆ *ಲಯ* ಹೊಂದಿದ(*ಮೃತರಾದ)*ಮಹಾತ್ಮರಾದ ಪೂರ್ವಜರನ್ನು ಯಾವ ತಿಥಿಯಲ್ಲಿ ಸ್ಮರಿಸಲೇಬೇಕೋ ಆ ತಿಥಿಯೇ *ಮಹಾಲಯ.*ಇದು ಹರಿನೈದು ದಿವಸಕ್ಕೂ ಅನ್ವಯವಾಗುತ್ತದೆ.ಆದ್ದರಿಂದಲ್ದೇ ಇದು *’ಅಪರಪಕ್ಷ’.*ಇದಕ್ಕಿಂದ ಉತ್ತಮವಾದ ಪಕ್ಷವಿರುವುದಿಲ್ಲ ಎಂದೇ *ಅಪರಪಕ್ಷ.(ನಾಸ್ತಿ ಪರಃ ಉತ್ತಮ ಪಕ್ಷ ಯಸ್ಯಾತ್ ಅಪರಪಕ್ಷ:)* *ಅಪರ ಪಕ್ಷ *ಎಂದರೆ ಕೃಷ್ಣಪಕ್ಷಕ್ಕೆ ಸಾಮಾನ್ಯವಾಗಿ ಹೆಸರಿದ್ದರೂ *ಪಿತೃಗಳಿಗೆ ಇದು ಉತ್ತಮವಾದದ್ದು.*

ಈ *ಅಮವಾಸ್ಯೆಯಂದು ಸರ್ವಪಿತೃಗಳಿಗೂ* ಉದ್ದೇಶಿಸಿ *ಶ್ರಾದ್ಧವನ್ನು ಮಾಡಬೇಕು.ಶ್ರಾದ್ಧಾಂಗ ತರ್ಪಣವನ್ನು ಬಿಡಬೇಕು.*

|| ನಾಹಂ ಕರ್ತಾ ಹರಿಃ ಕರ್ತಾ ||
|| ಶ್ರೀಮನ್ಮಧ್ವವಲ್ಲಭ ಜನಾರ್ಧನಂ ವಾಸುದೇವ ಪ್ರೀಯತಾಂ ಪ್ರಿಯೋ ವರದೋ ಭವತು ಶ್ರೀಕೃಷ್ಣಾರ್ಪಣಮಸ್ತು ||

Prasad J

 

Related Posts

Leave a Reply

shares
satta king tw