ತಾಳುವಿಕೆಗಿಂತನ್ಯ ತಪವು ಇಲ್ಲ

timefliesಇತ್ತೀಚಿನ  ದಿನಗಳಲ್ಲಿ ಯಾರು ಯಾರನ್ನ ಮಾತಾಡಿಸಿದರೂ ನಾನು ತುಂಬಾ busy, time ಇಲ್ಲ ,ಸಾಕಾಗ್ತಿಲ್ಲ ಎಂಬ ಪದಗಳು ಕೇಳಿ ಬರುತ್ತದೆ. ನಮ್ಮ ಬಿರುಸು ಬದುಕಿನ ಶೈಲಿಯಲ್ಲಿ ಕ್ಷಣಕಾಲ ಬಿಡುವು ಮಾಡಿಕೊಂಡು ಪರಾಮರ್ಶಿಸಿ ನೋಡಿದರೆ time  ಇಲ್ಲ  ಅನ್ನೋ ಕಾರಣದಿಂದಾಗಿ ನಮ್ಮ ದೈನಂದಿನ  ಚಟುವಟಿಕೆಗಳಲ್ಲಿ ನಾವುಗಳೇ ಮಾಡಿಕೊಂಡಿರುವ ಮಾರ್ಪಾಡುಗಳು ಕಣ್ಣೆದುರಿನ ವಿಶಾಲ ಪರದೆಯ ಮೇಲೆ ಮೂಡಿಬಂದು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.

ಮನುಷ್ಯ ದುಡಿಯುವುದೇ ಅವನ ಅಸ್ತಿತ್ವಕ್ಕಾಗಿ   ಹಾಗು ಅವಶ್ಯಕತೆಗಳ ಪೂರೈಕೆಗಾಗಿ. ಅಸ್ತಿತ್ವಕ್ಕೆ ಅತಿ ಅವಶ್ಯಕ ಅವನ ನಿತ್ಯ ಆಹಾರ. ಮನೆಯಲ್ಲಿ ಒಲೆ  ಹೊತ್ತಿಸಿ,ಧವಸ ಧಾನ್ಯಗಳನ್ನ ತಂದು, ಶುದ್ದೀಕರಿಸಿ, ಕಾಯಿ ಪಲ್ಯ ತಂದು, ತೊಳೆದು, ಹೆಚ್ಚಿ, ಬೇಯಿಸಿ, ಬೆರೆಸಿ, ಭಗವಂತನಿಗೆ ನಿವೇದಿಸಿ ತಿನ್ನುವ ಕ್ರಮಕೆ time ಇಲ್ಲದ  ನಾವು instant food  ಪದ್ದತಿಗೆ ವಾಲಿದ್ದೀವಿ. ಕುದಿಯುವ  ನೀರಲ್ಲಿ ಸಿದ್ದಪಡಿಸಿದ ಆಹಾರ ಪೊಟ್ಟಣವನ್ನ ಪ್ಯಾಕೆಟ್ ಸಮೇತ ಕುದಿಸಿದರೆ, ಕೆಲವ ಸೆಕೆಂಡುಗಳಲ್ಲಿ ಬಾಯಲ್ಲಿ ನೀರೂರಿಸುವ ಬಿಸಿಬಿಸಿ ಬಿಸಿಬೇಳೆಬಾತ್, ಪೊಂಗಲ್, ಕೇಸರಿಬಾತ್, ಪುಳಿಯೋಗರೆ ready to eat !!!

ಅಲ್ಪ ಸ್ವಲ್ಪ ರೋಗರುಜಿನಗಳು ಬಂದರೆ ನಾಕಾರು ದಿನ ಕಾಡಿಸೋ,ಪೀಡಿಸೋ, ತಾಳ್ಮೆ ಪರೀಕ್ಷಿಸೋ  ನಮ್ಮನ್ನ ಕಾಡುವ ಅವುಗಳಿಂದ ಪಾರಾಗಿ ಬಿಡುಗಡೆ ಪಡೆಯಕ್ಕೆ ಎಡಬಿಡದೆ ತೆಗೆದುಕೊಂಡ ಮನೆಮದ್ದು,ಶುದ್ಧ ಆಯುರ್ವೇದ ಓಷಧಿಗಳ ಗಾಢ ಪ್ರಭಾವದಿಂದ ನಾ ಸೋತೆ ಅಂತ ಕಾಯಿಲೆ ಮಾಯಾ ಅಗ್ತಿದ ಕಾಲ ಈಗಿಲ್ಲದ  ಕಾರಣ ,ಕೊಡಲೇ ಗುಣ ಮಾಡುವ antibioticsಗೆ ಮಾರುಹೋಗತ್ತೆವೆ. ಅದಕ್ಕೂ ಜಗ್ಗದಿದ್ರೆ  ನಮ್ಮ ದೇಹವನ್ನ ತನ್ನ ಕೈಗೊಂಬೆ ಮಾಡಿಕೊಂಡು ಮೊದಲು ನಗಿಸಿ ಆಮೇಲೆ ಶಾಶ್ವತವಾಗಿ ಅಳುಸುವ steroidsಗೆ ಶರಣಾಗ್ತೀವಿ .

ನಮ್ಮ ಕಾಮನೆಗಳನ್ನು ಈಡೇರಿಸಿಕೊಳ್ಳಕ್ಕೆ ನಾವೇ ಹರಕೆ ಹೊತ್ತು, ಫಲಸಿಕ್ಕ ನಂತರ ಹರಕೆ ತೀರಿಸೋ ಸಮಯ ಬಂದಾಗ ಸಂಕ್ಷಿಪ್ತ ವಿಧಾನದಲ್ಲಿ ಹರಕೆ ಸಲ್ಲಿಸಕ್ಕೆ contractನಲ್ಲಿ ಜನನ್ನ book ಮಾಡಿಕೊಳ್ಳೋ ಕಾಲ ಇದು. ಹಡೆದ ಕೂಸು ತೊದಲು ನುಡೀತ  ಅಮ್ಮ ಅಪ್ಪ ಅನ್ನೋ.  ಮುನ್ನ ಬಂದವರಿಗೆ hai  hello ,ಹೋಗುವವರಿಗೆ tata ಹೇಳಿ social behavior  ಕಲೀಲಿ  ಅನ್ನೋ ಮಹತ್ವಾಕಾಂಕ್ಷೆ.

ಅಷ್ಟೇ ಅಲ್ಲ  ನಮಗೆಂದೇ ಮನೆಯ ಕೈತೋಟದಲ್ಲಿ  ಬೆಳಿಯಬಹುದಾದ ಹಣ್ಣು, ಕಾಯಿ, ಗಿಡ, ಮರಗಳು ಸಹಜವಾಗಿ ಫಲ ಬಿಡೋವರೆಗೆ ಕಾಯೋ ಸಂಯಮ ಇಲ್ಲದೆ hybridಗೆ ಶರಣಾಗಿ ಹೈರಾಣಾಗ್ತಿರೋ ನಮ್ಮ ಬಗ್ಗೆ ನಗಬೇಕೋ ಅಳಬೇಕೊ ಗೊತ್ತಾಗ್ತಾ ಇಲ್ಲ . ಚಟ್  ಕರ್ಮ  ಫಟ್  ಫಲ! ಅದಕ್ಕಾಗಿ ಎಷ್ಟೆಲ್ಲ circus ಒಂದಂತೂ ನಿಜ. ಆ ಪ್ರಯತ್ನ ಆ perseverence  ಮೆಚ್ಚಲೇಬೇಕು .ಆದರೆ end result ಏನು? success rate ಎಷ್ಟು?

ಯಾಕೆ ಹೀಗೆ ನಾವು? ಏನಂಥಾ ಆತುರ? ಏನಂಥಾ  ಕಾತುರ? …….. ಉತ್ತರ ಒಂದೇ ಪದ. ನಮಗೆ “time ” ಇಲ್ಲ.

ನಮ್ಮ ಈ busy  schedule  ನಲ್ಲೂ ಒಂದು ಕ್ಷಣ ಬಿಡುವು ಮಾಡಿಕೊಂಡು ನಮ್ಮ ಪೂರ್ವಿಕರ ಬದುಕನ್ನ ನಮ್ಮ ಬದುಕಿನೊಂದಿಗೆ ತಾಳೆ ಹಾಕಿ ನೋಡೋಣ. ಸಂಪತ್ತು,

Vadiraajaru
Vadiraajaru

ಸವಲತ್ತು,ತಾಂತ್ರಿಕ ಆವಿಷ್ಕಾರ, ಸೌಲಭ್ಯಗಳು ಇದೇ  ಮುಂತಾದವುಗಳ  ಮಹಾಪೂರವೇ ನಮಗಿದೆ .ಇದಾವುದರ ಪರಿಚಯವೇ ಇಲ್ಲದಿದ್ದರೂ ತಮ್ಮ ಸ್ವಸಾಮರ್ಥ್ಯ , ಬುದ್ಧಿವಂತಿಕೆ , ಮನೋಬಲ, ದೂರದೃಷ್ಟಿ ,ಭವಿಷ್ಯದ ಯೋಜನೆ ಮುಂತಾದವುಗಳೊಂದಿಗೆ ಪರೋಪಕಾರ, ಪರಹಿತಚಿಂತನೆ ಎಂಬಿತ್ಯಾದಿ ಮೌಲ್ಯಗಳ ಆಧರಿಸಿ ಆರೋಗ್ಯವಂತ, ಧೀರ್ಘ ಆಯಸ್ಸಿನ, ಸಂತೃಪ್ತ ಸಾರ್ಥಕ ಬಾಳ್ವೆಯನ್ನು ಅವರುಗಳು ನಡೆಸಿದ್ದರು . ಬಡತನವಿದ್ದರೂ ನೆಮ್ಮದಿ ನೇಹ, ನಿಸ್ಪೃಹ ಹೃದಯವಂತಿಕೆಯಲ್ಲಿ ಯಾವ ದಾರಿದ್ರ್ಯ ಕೊರತೆ ಕಂಡಂತಿಲ್ಲ. ನಮ್ಮ ಬದುಕಿಗೂ ಅವರ ಬದುಕಿಗೂ ಅಜಗಜಾಂತರ ವ್ಯತ್ಯಾಸ.

ಇದ್ದದು  ಇರುವುದು ಅದೇ  24 ಗಂಟೆಗಳ ದಿನದ ಅವಧಿ. ಬದುಕಿಗಾಗಿ ಅವಶ್ಯಕವಾದ ಸಂಪತ್ತಿನ ಗಳಿಕೆಯಲ್ಲೂ ಧರ್ಮಕರ್ಮಗಳ ವಿವೇಚನೆ ಹೊಂದಿದ್ದು, ಇಂದಿನ ಭೋಗ ಮಾತ್ರವಲ್ಲದೆ ನಾಳಿನ ಯೋಗಕ್ಕಾಗಿ ಬಾಳಿದವರು ಅವರು. ಇಂದಿನ ಈಗಿನ ಬದುಕನಷ್ಟೇ ನಂಬಿಕೊಂಡು ಕ್ಷಣಿಕ ಸುಖಕ್ಕಾಗಿ ಬದುಕಿನ ನೊಗಕ್ಕೆ ಕತ್ತು  ನೀಡಿರುವ ಎತ್ತು ನಾವು . ಪ್ರಾಯಶಃ ನಮ್ಮ ಅಸ್ತಿತ್ವದ ಬಗ್ಗೆ ನಮಗೆ ಇರುವ  ಅಪನಂಬಿಕೆಯೇ ಈ ಅವಸರಕ್ಕೆ ಕಾರಣ ಇರಬಹುದು.

ಶುದ್ಧವಲ್ಲದೆ, ಸತ್ವಯುತವಲ್ಲದ ನಮ್ಮ ಅಭ್ಯಾಸಗಳು ನಮ್ಮನ್ನು ಶಿಥಿಲ, ನಿಸ್ತೇಜ, ನಿಶಕ್ತ ಹಾಗು ಸತ್ವಹೀನ ಮಾಡುತ್ತಿರುವ ಕಟು ಸತ್ಯದ ಅರಿವು ಮನದ ಮೂಲೆಯಲ್ಲಿ ಬಲವಾಗಿ ಇರಬಹುದೇನೋ !!!!!

ಈ ಧಾವಂತದ ಬದುಕಿನಲ್ಲಿ ನಮ್ಮನ್ನು ನಾವು ವ್ಯಾಖ್ಯಾನಿಸಿಕೊಂಡಿರುವಂತೆ ವಾಸ್ತವ ಇಲ್ಲ  ಎಂಬುದೇ ಸತ್ಯ. ನಮಗಾದರ ಅರ್ಥ  ಈಗ ಆಗುತ್ತಿಲ್ಲ. ಈ ಬದುಕಿನ ಕೊನೆಯ ಮಜಲಿನಲ್ಲಿ, ದಾರಿ ತಪ್ಪಿದೆ, ಗುರಿ ಕೈಜಾರಿದೆ ಅನ್ನೋ ವಾಸ್ತವಾಂಶ ಮನವರಿಕೆಯಾದಾಗ ಕಂಗಾಲಾಗಿ ಕೊನೆಗೆ ವಿಧಿ ನಿಯಮ ಅನ್ನೋ ಮಾತು ಆಡಿ defensive ಆಗಿ ನಮ್ಮನ್ನ ನಾವೇ defend  ಮಾಡ್ಕೋತೀವಿ.

ನಾವು ಅಂದುಕೊಂಡ ಹಾಗೆ ಎಲ್ಲಾ ನಡೆಯೋ ಹಾಗಿದಿದ್ರೆ ಈ ಭಯ, ಆತಂಕ, ಉದ್ವೇಗ ,ತಳಮಳ, ಅಭದ್ರತೆ ನಮ್ಮನ್ನ ಕಾಡ್ತಿತಾ ? ಜಗತ್ತನ್ನ microchipನಲ್ಲಿ ಹುದುಗಿಸಿ ಇಡುವ ಛಾತಿ

ಮನುಷ್ಯನಲ್ಲಿ ಇದ್ದರೂ, ಅವನು ಅಸ್ವತಂತ್ರ .ಆದರೆ ಒಪ್ಪಿಕೊಳ್ಳಲಾರ. ಇದನ್ನ digest  ಮಾಡಿಕೊಳ್ಳಕ್ಕೆ ಆಗ್ತಾಇಲ್ಲ . ಎಲ್ಲ instantaneous ಆಗಬೇಕು ಅಂತ try  ಮಾಡ್ತಾನೆ. sow now  reap  now .

ಹಾಗೆ ಇದ್ದಿದ್ರೆ ಚೆನ್ನಾಗಿ ಇರೋದು. but alas !,. ಕಾಲ ಕರ್ಮ ಕೂಡಿ ಬರೋವರೆಗೆ ಕಾಯಲೇ ಬೇಕು ಅನ್ನೋದೇ ಜಗದ ನಿಯಮ. ನಿನ್ನ ಪಾಲಿನ ಕರ್ಮ  ಮಾಡು ಫಲಾಫಲಗಳ ಲೆಕ್ಕಾಚಾರ ಅವನಿಗೆ ಬಿಡು ಅನ್ನೋದೇ ಮೂಲ ಪಾಠ .

ಇಷ್ಟನ್ನ  ನಾವು ಅರ್ಥ ಮಾಡಿಕೊಂಡರೆ ಅದು ಉತ್ತಮವಾದ ಬದುಕು. ಕಾದು  ಪಡೆಯುವ ಫಲದಲ್ಲಿ ರುಚಿ, ಸವಿ, ಸತ್ವ ಎಲ್ಲಾನು ಅದ್ಭುತ ಅಮೋಘ. ಕಾಯೋ  ತಾಳ್ಮೆ, ಸಂಯಮ ಇದಕ್ಕೆ  ತುಂಬಾ ಮುಖ್ಯ. ಆದರೆ  ಅದು ಸುಲಭವಲ್ಲ. ಅದನ್ನೇ ಶ್ರೀ ವಾದಿರಾಜ ಗುರುಸಾರ್ವಭೌಮರು ಹೇಳಿದ್ದು. “ತಾಳುವಿಕೆಗಿಂತನ್ಯ ತಪವು ಇಲ್ಲ “ ಎಂದು.

ಲೇಖಕಿ  – ದೀಪಿಕಾ ಪಾಂಡುರಂಗಿ 

Leave a Reply

satta king tw