ತೈಲಾಭ್ಯಂಜನ ಕಡ್ಡಾಯ – ನರಕ ಚತುರ್ದಶಿಯಂದು ಪ್ರತಿಯೊಬ್ಬ ಜೀವಿಯೂ ಅಭ್ಯಂಜನವನ್ನು ಮಾಡಲೇಬೇಕು. ಇಲ್ಲದಿದ್ದರೆ ದಾರಿದ್ರ್ಯಾದಿಗಳಿಂದ ಪೀಡಿತರಾಗುವರು.
Read this article in English Significance of Naraka Chaturdashi
ಈ ದಿನ ಗಂಗೆಯು ಜಲದಲ್ಲಿ ಮತ್ತು ತೈಲದಲ್ಲಿ ಲಕ್ಷ್ಮೀದೇವಿಯು ವಿಶೇಷವಾಗಿ ಸನ್ನಿಹಿತಳಾಗಿರುತ್ತಾರೆ.
ಸಾಮಾನ್ಯವಾಗಿ ತಂದೆ ತಾಯಿಗಳ ಶ್ರಾದ್ಧ ದಿನಗಳಲ್ಲಿ, ವ್ಯತೀಪಾತ, ವೈಧೃತಿ ಯೋಗಗಳಲ್ಲಿ ಅಭ್ಯಂಜನವನ್ನು ಮಾಡಿಕೊಳ್ಳುವ ಸಂಪ್ರದಾಯವಿಲ್ಲ. ವಿಧವೆಯರೂ, ಸನ್ಯಾಸಿಗಳೂ ಅಭ್ಯಂಜನವನ್ನು ಮಾಡಿಕೊಳ್ಳಬಾರದು ಸಾಮಾನ್ಯವಾಗಿ. ಆದರೆ ನರಕ ಚತುರ್ದಶಿಯಂದು ಇದೆಲ್ಲ ಇದ್ದರೂ ಕೂಡ ಅಭ್ಯಂಜನವನ್ನು ಮಾಡಲೇಬೇಕು. ಸನ್ಯಾಸಿಗಳೂ, ವಿಧವೆಯರೂ ಅಭ್ಯಂಜನವನ್ನು ಮಾಡಿಕೊಳ್ಳಲೇಬೇಕು.
ಏಕೆ ಅಭ್ಯಂಜನವನ್ನು ಮಾಡಿಕೊಳ್ಳಬೇಕು – ಈ ದಿನ ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ನರಕಾಸುರನು ಒಂದು ವರವನ್ನು ಕೇಳುತ್ತಾನೆ. “ನನ್ನ ಸಂಹಾರದ ನೆನಪಿಗಾಗಿ ಎಲ್ಲರೂ ಅಭ್ಯಂಜನವನ್ನು ಮಾಡಬೇಕು ಮತ್ತು ದೀಪಪ್ರಜ್ವಲನವನ್ನು ಮಾಡಬೇಕು” ಎಂದು ಕೇಳಿದುದರಿಂದ ಕೃಷ್ಣನು ಹಾಗೆಯೇ ಆಗಲಿ ಎಂದು ಅನುಗ್ರಹಿಸಿದ್ದನು. ಅದರ ನಿಮಿತ್ತ ಎಲ್ಲರೂ ಅಭ್ಯಂಜನವನ್ನು ಮಾಡಿಕೊಳ್ಳಬೇಕು. ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ಅವನ ಮೇಲೆ ರಕ್ತದ ಕಲೆಗಳು ಸಿಡಿದಿದ್ದವು. ಅದನ್ನು ತೊಳೆದುಕೊಳ್ಳಲೆಂಬಂತೆ ಶ್ರೀಕೃಷ್ಣನೂ ಸಹ ಎಣ್ಣೆ-ನೀರನ್ನು ಹಾಕಿಕೊಂಡಿದ್ದನು
ಅಭ್ಯಂಜನ ವಿಧಿ – ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಗರಿಕೆ ಮುಂತಾದುವನ್ನು ದೇವರ ಮುಂದಿಟ್ಟು
“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |
ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|
ಎಂಬಂತೆ ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ಲಕ್ಷ್ಮಿ ಹಾಗೂ ಸಕಲ ದೇವತೆಗಳಿಗೂ, ಗುರುಹಿರಿಯರಿಗೂ ಸಮರ್ಪಿಸಿ, ನಮಸ್ಕರಿಸಿ, ಅವರಿಂದ ಆಶೀರ್ವಾದ ಪಡೆದು, ಮನೆಯ ಹಿರಿಯ ಸುಮಂಗಲೀ ಸ್ತ್ರೀಯರಿಂದಾಗಲೀ, ಅಥವಾ ನೆರೆಹೊರೆಯ ಬಂಧುಗಳಿಂದಾಗಲೀ, ಅಥವಾ ಯಾರೂ ಇಲ್ಲದಿದ್ದರೆ ತನ್ನ ಹೆಂಡತಿಯಿಂದಾಗಲೀ ಎಣ್ಣೆ ಶಾಸ್ತ್ರವನ್ನು ಮಾಡಿಸಿಕೊಂಡು ಗರಿಕೆಗಳಿಂದ :
ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |
ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||
ಎಂದು ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.
ಯಮತರ್ಪಣಂ यमतर्पणं
ಆಚಮನ, ಸಂಕಲ್ಪ – ಪ್ರಣವಸ್ಯ…………………..ಚತುರ್ದಶ್ಯಾಮ್, ಶುಭತಿಥೌ, ಮಮ ನರಕ ಭಯ ನಿವೃತ್ತಿದ್ವಾರ ಶ್ರೀ ಯಮಾಂತರ್ಗತ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ/ವೇಂಕಟೇಶ ಪ್ರೀತ್ಯರ್ಥಂ, ನರಕಚತುರ್ದಶಿ ಪರ್ವಕಾಲ ಪ್ರಯುಕ್ತಂ ಯಮ ತರ್ಪಣಮಹಂ ಕರಿಷ್ಯೇ.
ಯಮಂ ತರ್ಪಯಾಮಿ | ಧರ್ಮರಾಜಂ ತರ್ಪಯಾಮಿ |
ಮೃತ್ಯುಂ ತರ್ಪಯಾಮಿ | ಅಂತಕಂ ತರ್ಪಯಾಮಿ |
ವೈವಸ್ವತಂ ತರ್ಪಯಾಮಿ | ಕಾಲಂ ತರ್ಪಯಾಮಿ |
ಸರ್ವಭೂತಕ್ಷಯಂ ತರ್ಪಯಾಮಿ | ಔದುಂಬರಂ ತರ್ಪಯಾಮಿ |
ದದ್ಧ್ನಂ ತರ್ಪಯಾಮಿ | ವೃಕೋದರಂ ತರ್ಪಯಾಮಿ |
ನೀಲಂ ತರ್ಪಯಾಮಿ | ಪರಮೇಷ್ಟಿನಂ ತರ್ಪಯಾಮಿ |
ಚಿತ್ರಂ ತರ್ಪಯಾಮಿ | ಚಿತ್ರಗುಪ್ತಂ ತರ್ಪಯಾಮಿ |
यमं तर्पयामि । धर्मराजं तर्पयामि ।
मृत्युं तर्पयामि । अंतकं तर्पयामि ।
वैवस्वतं तर्पयामि । कालं तर्पयामि ।
सर्वभूतक्षयं तर्पयामि । औदुंबरं तर्पयामि ।
दद्ध्नं तर्पयामि । वृकोदरं तर्पयामि ।
नीलं तर्पयामि । परमेष्टिनं तर्पयामि ।
चित्रं तर्पयामि । चित्रगुप्तं तर्पयामि ।
——————
ಉಲ್ಕಾದಾನ – ಸೂರ್ಯನು ತುಲಾದಲ್ಲಿರುವಾಗ ಪ್ರದೋಷಕಾಲದಲ್ಲಿ ಉಲ್ಕೆಯನ್ನು ಪ್ರದರ್ಶಿಸಬೇಕು. ಇದರಿಂದ ಮಹಾಲಯಕ್ಕಾಗಿ ಯಮಲೋಕದಿಂದ ಬಂದ ಪಿತೃಗಳು ಹಿಂದಿರುಗುವಾಗ ದಾರಿಯನ್ನು ತೋರಲು ಹಾಗೂ ಕುಲದಲ್ಲಿ ಹುಟ್ಟಿ ಬೆಂಕಿಯಲ್ಲಿ ದಗ್ಧರಾದವರು, ಹಾಗೆಯೇ ಮೃತರಾದವರೂ, ಸಿಡಿಲು-ಮಿಂಚುಗಳಿಂದ ಮೃತರಾದವರೂ ಉತ್ತಮಗತಿಯನ್ನು ಹೊಂದಲು ಮನೆ ಸುತ್ತಮುತ್ತ ದೀಪಗಳನ್ನು ಬೆಳಗಿಸಬೇಕು.
ಅಗ್ನಿದಗ್ದಾ: ಯೇ ಜೀವಾ ಯೇಪ್ಯದಗ್ದಾ: ಕುಲೇ ಮಮ |
ಉಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತು ವ್ರಜಂತು ತೇ |
ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಪದೇ |
ಉಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತೋ ವ್ರಜಂತು ತೇ |
ಪ್ರಸಾದ್ ಜೆ