gururayaru

ಸಾಧನಕೆ ಬಗೆಗಾಣೆ ಎನ್ನಬಹುದೇ ?

Articles, Authors, Deepika Pandurangi No Comment
Spiritual attainment
Spiritual attainment

ಪ್ರಿಯ ಓದುಗರೇ, ಧನುರ್ಮಾಸ ಮುಗಿತು ನಿಜ…. ಆದ್ರೂ, ಈ article ಅಪ್ರಸ್ತುತ  ಅನ್ಸಲ್ಲ ಅನ್ಕೋತೀನಿ .

ಸಾಧನಕೆ ಬಗೆಗಾಣೆ  ಅನ್ನೋ ನನ್ನಂಥಾ ಸೋಮಾರಿಗಳಿಗೆ ಹೇಳಿ ಮಾಡಿಸಿದ ಕಾಲ ಇದು. ಮೈ ನಡುಗಿಸೋ ಛಳಿ,ಕೈ ಕಾಲು ಸೆಳೆಯೋ ಕೊರೆತ. ತಲೆಗೆ ಟೋಪಿ ಕಾಲಿಗೆ socks , woolen blanket , double cusioned ಹಾಸಿಗೆ. ದೇಹ ಮುದುರಿಕೊಂಡು ಮುಸುಕುಹಾಕಿ ಮಲಕೊಂಡ್ರೆ …. ಇಲ್ಲೇ ಸ್ವರ್ಗ. ಅನುಭವಿಸದವರ್ಗೆ ಗೊತ್ತು ಇದರ ಗಮ್ಮತ್ತು.

ನಾವೇ set ಮಾಡಿಟ್ಟ alarm ಹೊಡಕೊಂಡ್ರೆ ಅದರ ತಲೆಮೇಲೆ ಮಟಕಿ ಮತ್ತೆ ನಿದ್ರೆಗೆ ಜಾರಿ ಸೊಗಸಾದ ಕನಸು ಕಣೋ ಪ್ರಯತ್ನ ನಮ್ದು . ತಪ್ಪೇನಿಲ್ಲ ಬಿಡಿ. ಬೆಳಗಿನ ಜಾವದ ಕನಸು ಸತ್ಯ ಆಗತ್ತಂತೆ. ಅದಕ್ಕಾಗಿ ಈ ಪ್ರಯತ್ನ ಅಂತಾನೆ defend ಮಾಡ್ಕೊಳ್ಳೋಣ. ಇರ್ಲಿ.

ನಿದ್ರೆಯ peak  ಪ್ರವೇಶಿಸಿದ್ದೆ ನಾನು. ಆ ಸಮಯದಲ್ಲಿ ಎಲ್ಲಿಂದ್ಲೋ ಕೀಳಿ ಬಂದ  ಬೇಡವಾದ ಸದ್ದು, ಸ್ವಲ್ಪ ಹೊತ್ಗೆ ಮೂಗಿಗೆ ಬಡಿದ ಆ ವಾಸನೆ ನನ್ನ ಸೊಂಪಾದ ನಿದ್ರೆಗೆ ಭಂಗ ತಂದಿದ್ರಲ್ಲಿ ಎರಡು ಮಾತಿಲ್ಲ.  ಬೈಕೊಂಡು, ಬೇಸರಿಸ್ಕೊಂಡು, ಹೊಸಕಾಡ್ತಾ ಜಾಗ್ರದಾವಸ್ಥೆಗೆ ಕಾಲಿಟ್ಟೆ ನಾನು. ವಾಸ್ತವ ಅರ್ಥವಾಯ್ತು.

ಅಲ್ಲಾ ರೀ …… ಹೇಳಿ ಕೇಳಿ ಈ ಕೊರಿಯೋ ಕಾಲ್ದಲ್ಲಿ ಮಧ್ಯರಾತ್ರಿ ಮೂರಕ್ಕೆ ಏಳ್ತಾರೆ. ಸಿಕ್ಕಿದ್ರೆ ನದಿ, ಸರೋವರ, ಪುಷ್ಕರ್ಣಿ. ಇಲ್ಲ್ದಿದ್ರೆ ಬಾವಿ ಕೊಳಾಯಿ. ಮುಟ್ಟದ್ರೆ ದೇಹದ ನರನಾಡಿಗೆ shock ಕೊಡೊ ತಣ್ಣೀರು. ತುಂಡು ಚೌಕ ಮೈಗೆ ಸುತ್ಕೊಂಡು ಲೆಕ್ಕ ಇಲ್ದೆ ಕೊಡ ಕೊಡ ನೀರಿನ ಅನಾಯಾಸ ಶಿಕನಖಂತ ಸುರ್ಕೋತಾರೆ. ಮೈ ಪದರ್ಗುಟತಿರೋವಾಗ ನಡುಗೋ ಗಂಟಲಿಂದ ಜೋರಾದ ಸ್ತೋತ್ರ ಪಠಣ ಬೇರೆ!!!

ಸ್ನಾನದ ಆರ್ಭಟ ಆದಮೇಲೆ ಸ್ವಲ್ಪ ಹೊತ್ತು ಸದ್ದು ನಿಲ್ಲತ್ತೆ. ಜಪವೋ ತಾಪವೋ…. ಆ ದೇವರಿಗೆ ಗೊತ್ತು. ಮತ್ತೆ ಶುರು ಆಯಿತು ನೋಡೀ ….. ಅವರ ಮನೆ ದೇವರ ಕೊನೆ ಅಷ್ಟೇ ಅಲ್ಲ cross ತುಂಬಾ ಇರೋ ಮನೆ ಜನರ ಮೂಗಿಗೆ ಬಡಿಯೋ ಹಾಗೆ ಧೂಪದ ಘಾಟು. Cycle Pure Agarbatti brand ambassador ಅನ್ನೋ ಹಾಗೆ ಷೋಡಶೋಪಚಾರದ  ಧೂಪದ ಘಟ್ಟ. ಅದಾಗಿ  ಸ್ವಲ್ಪನೇ ಹೊತ್ತು. GRB ತುಪ್ಪದಲ್ಲಿ ಗೋಡಂಬಿ ದ್ರಾಕ್ಷಿ ಹುರಿದು, ಆಗಷ್ಟೇ ಅಗ್ಗಿಸ್ಟಿಕೆಯಿಂದ ಇಳ್ಸಿದ್ದ ಹುಗ್ಗಿ, ಸಿಹಿ ಪೊಂಗಲ್ಗೆ ಒಗ್ಗರಣೆ ಕೊಟ್ಟು ಅದರ ಸುವಾಸನೆ ಊರ್ ತುಂಬಾ ಹರ್ಡತು . ಮನೆ ಮಂದಿಯಲ್ಲ ಘಂಟೆ ಜಾಂಘಟೆ ಹಿಡಿದು rhythemic ಆಗಿ ಬಾರಿಸಕ್ಕೆ ಶುರು ಮಾಡದ್ರೂ. ಒಂದಲ್ಲ ಎರಡಲ್ಲ ಸಾಲುಸಾಲಾಗಿ ಮಂಗಳಾರತಿಗಳು.

ಇವುಗಳಮುಂದೆ ಇನ್ಯಾವ alarm ? ಇನ್ನೆಲ್ಲಿ ನಿದ್ರೆ? ಮೈ ಕೊಡವಿಕೊಂಡು ಏಳಲಿ ಬೇಕಾದ ಕಥೆ ವ್ಯಥೆ. ಬಲವಂಥ ಮಾಘ ಸ್ನಾನ ಅನ್ನೋ ಹಾಗೆ.

ನಂಥರದವನ್ನ ಕಾಡಿಸೋ ಚಳಿ ಮಳೆ ಬಿಸಿಲು ಯಾವುದೂ ಲೆಕ್ಕಕ್ಕೆ ಇಲ್ವಾ ಇವರಿಗೆ!?ಅದ್ಯಾವ್ಥರ special model ಇವರು?ತಲೆ ಮೇಲೆ ತಲೆ ಬಿದ್ರು ಸರಿ…… ಇವರಾಯ್ತು ಇವರ ಸಾಧನೆ ಆಯಿತು!

ಬೆಳಗ್ಗೆ   7.30 ರ ಹೊತ್ತು. ಆಕಾಳ್ಸ್ಕೊಂಡು, ಮೈ ಮುರ್ಕೊಂಡು  ಪಕ್ಕದ್ಮನೆಯವರ್ನ ಚೆನ್ನಾಗೆ ಬೈಕೊಂಡು gate ಗೆ ಹಾಕಿದ ಬೀಗ ತೆಗಿಯೋಣ ಅಂತ ಹೊರಗೆ ಬಂದ್ರೆ, ಊರ್ಧ್ವ ಪುಂಡ್ರ ಹಚ್ಚಿದ್ದ  dam fresh ಮುಖ pleasant ಆಗಿ smile ಕೊಡ್ತಾ , sparkling eyes ನಿಂದ ನೋಡ್ತಾ “GOOD MORNING “ಅಂತು. ಧನುರ್ಮಾಸದ ಚಳಿಗೆ ಸೆಡ್ಡು ಹೊಡೆದು 3ಕ್ಕೆ ಎದ್ದು formal rituals ಸಾಂಗೋಪಾಂಗವಾಗಿ ಮುಗಿಸಿದ್ದ ಮುಖ ಅಲ್ಲಿದ್ರೆ, ನಿದ್ರಾದೇವಿಗೆ ಅವಮಾನ ಮಾಡ್ಬಾರ್ದು ಅಂತ ದೇಹ ಮುದುರಿಕೊಂಡು  ಬೆಚ್ಚಗೆ ಕಾಪಿಟ್ಟುಕೊಂಡ 7.30 ಕ್ಕೆ ಅರಳಿದ್ದ stale face ಇಲ್ಲಿತ್ತು!

ತಡಿಯಕ್ಕಾಗದೆ ಕೇಳೇಬಿಟ್ಟಿ. ಏನ್ರೀ ಮಾರಾಯ್ರೆ…. ಹಸಿವು, ನಿದ್ರೆ, ಆಲಸ್ಯ, ಆಯಾಸ, ಬೇಸರ, ಜಿಗುಪ್ಸೆ ಇದ್ಯಾವ್ದು ಇಲ್ವಾ ನಿಮಗೆ? Duty bound ಅನ್ನೋಹಾಗೆ ಪೂಜೆ ಪುನಸ್ಕಾರ ಮಾಡ್ತಿರಲ್ಲ? ತಿಂಗಳ 1st  ಆದ್ರೆ ನಮ್ಮ account ಗೆ ಸಂಬಳ credit ಮಾಡೋ ನಮ್ಮ work place ಜೊತೆಗೇ ಇಂಥಾ commitment ಈ ಕಾಲದಲ್ಲಿ ಕಾಣೋದು ಕಷ್ಟ. ಅಂಥಾದ್ರಲ್ಲಿ ಸಾಧನೆ ಸಾಧನೆ ಅಂತ sanctitude  life ನಡ್ಸತಿದೀರಲ್ಲ ಅದ್ಹೇಗೆ ಸಾಧ್ಯ?  Time, patience, passion, dedicated devotion.ನಮಂಥವರ life style ಗೆ ಇದೆಲ್ಲಾ match ಆಗೋದೇ ಇಲ್ಲಾ.  ಅದಕ್ಕೆ ಅದರ ಗೋಜೇ ಬೇಡ ಅಂತ ನಿರಾಳವಾಗಿದೀನಿ. ಆದ್ರೂ, ನಿಮ್ನ ನೋಡಿದಾಗ ಒಂದುಥರಾ guilt ಕಾಡತ್ತೆ. I haveeverything. Money, luxury, status & what not…..yet I’m missing something ಅನ್ಸತ್ತೆ. ಒಂದು hollow feel ಕಾಡತ್ತೆ. But….. Compound ಪಕ್ಕ ನಿಂತಿದ್ದ ಆ ಮಹಾಶಯ ನಕ್ರು.  Gentleman, don’t be disappointed. ಸಾಧನೆಗಳಲ್ಲಿ ಹಲವು ಬಗೆ. ಕೆಲವು ತುಂಬಾ ಜಟಿಲ ಕೆಲವು ಅಷ್ಟೇ ಸುಲಭ. ಒಬ್ಬೊಬ್ಬನ ಸಾಧನೆಗೆ ಒಂದೊಂದು ದಾರಿ ಇದೆ.  As for your case is concerned, let me tell you…

ದಾಸವರ್ಯ ವಿಜಯದಾಸರೇ (Vjaya Dasaru) ಹೇಳಿರುವಂತೆ

“ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ ಉಂಡು ಉಟ್ಟದ್ದೆಲ್ಲಾ ವಿಷ್ಣುಪೂಜೆ ತಂಡತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ ಹಿಂಡು ಮಾತುಗಳೆಲ್ಲ ಹರಿಯನಾಮ.”

ಈ ದಾರಿ ಅನುಸರಿಸಿ. ಈ ಮಾರ್ಗ ಸುಲಭ. ಅನುಸಂಧಾನಕ್ಕಿಂತ ಮಹತ್ವವಾದದ್ದು ಯಾವುದೂ ಇಲ್ಲ. Hollowness ಕಳೆದು holyness ತುಂಬತ್ತೆ. It’s ofcourse magical.

Grab it before it’s too late! ಅಂದ್ರು.

ಈ ಮಧ್ಯ ನನ್ನ ಮಗಳು ನನ್ನ ಕೈಗಿಟ್ಟಿದ್ದ coffee mugನಲ್ಲಿದ್ದ coffee ತಣ್ಣಗಾಗಿತ್ತು. But ಕಳಾ ಹೀನವಾಗಿದ್ದ ನನ್ನ ಹೃದಯದಲ್ಲಿ ನವೋದಯದ ಕಾವು ಮೂಡಿತ್ತು. ಮತ್ತೆ ಅವರ ಮುಖ ನೋಡಿದೆ.

Have a nice day young man ಅಂತ ಹೇಳಿ smile ಮಾಡಿ ಒಳಗೆ ನಡೆದೇಬಿಟ್ಟರು.

ಲೇಖಕಿ  – ದೀಪಿಕಾ ಪಾಂಡುರಂಗಿ

Related Posts

Leave a Reply

shares
satta king tw