ಆಚಾರವಿಲ್ಲದ ನಾಲಿಗೆ
– ಪುರಂದರ ದಾಸರು
ಆಚಾರವಿಲ್ಲದ ನಾಲಿಗೆ ನಿನ್ನ
ನೀಚ ಬುದ್ಧಿಯ ಬಿಡು ನಾಲಿಗೆ
ವಿಚಾರವಿಲ್ಲದೆ ಪರರ ದೂಶಿಸುವುದಕೆ
ಚಾಚಿಕೊಂಡಿರುವಂಥ ನಾಲಿಗೆ
ಪ್ರಾಥ:ಕಾಲೊದಲೆದ್ದು ನಾಲಿಗೆ
ಶ್ರೀಪತಿ ಎನ್ನಬಾರದೇ ನಾಲಿಗೆ
ಪತಿತ ಪಾವನ ನಮ್ಮ ರತಿಪತಿ ಜನಕನ
ಸತತವೂ ನುಡಿಕಂಡ್ಯ ನಾಲಿಗೆ
ಚಾಡಿ ಹೇಳಲುಬೇಡ ನಾಲಿಗೆ
ನಿನ್ನ ಬೇಡಿಕೊಂಬೆನು ನಾಲಿಗೆ
ರೂಢಿಗೊಡೆಯ ಶ್ರೀ ರಾಮನ ನಾಮವ
ಪಾಡುತಲಿರು ಕಂಡ್ಯ ನಾಲಿಗೆ
ಹರಿಯಸ್ಮರಣೆ ಮಾಡು ನಾಲಿಗೆ
ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರ ವಿಠ್ಠಲ ರಾಯನ
ಚರಣ ಕಮಲ ನೆನೆ ನಾಲಿಗೆ
Read Article of Deepika Pandurangi ನಿಜ ದರ್ಪಣ