ಹಬ್ಬದ ಕಬ್ಬ-ಸಂಕ್ರಾಂತಿ ಬಾಂಧವ್ಯ

makar sankranti karnataka
makar sankranti karnataka

ಹಬ್ಬ ಅಂದ್ರೆ ಅದೇನೋ excitement . ಹಾಗಂತ ಸಂಭ್ರಮ ಅಷ್ಟೇ ಅಲ್ಲ. ನಮ್ಮ ಭಾರತೀಯ ಹಬ್ಬಗಳ ಆಚರಣೆ ಹಿಂದೆ ಅಗಾಧ ಅರ್ಥ ವಿಶ್ಲೇಷಣೆ ಇದ್ದೇ ಇರತ್ತೆ . ಎಲ್ಲದರ ಹಿಂದೆ ಒಂದು meaningful  message ಇದ್ದೇ  ಇರತ್ತೆ .

ಒಂದೊಂದು ಕಾಲಕ್ಕೆ ಒಂದೊಂದು ಹಬ್ಬ. ಒಂದೊಂದು ಹಬ್ಬದ ಹಿಂದೆ ಒಂದೊಂದು ಕಥೆ. ವೈವಿಧ್ಯಮಯ ಆಚರಣೆ, ಸಂಪ್ರದಾಯದ ಅನುಕರಣೆ.

Generations , ಕಾಲಘಟ್ಟ ಏನೇ ಹೇಳಿ. ಬದಲಾವಣೆ ಜಗದ ನಿಯಮ ಅನ್ನೋ ಹಾಗೆ ಎಲ್ಲದರಲ್ಲೂ ಬದಲಾವಣೆ ಕಂಡು ಬಂದಿದೆ. Life spanನಿಂದ life style , life  spectrum ಎಲ್ಲದರಲ್ಲೂ ಬದಲಾವಣೆ ಕಂಡು ಬಂದಿದೆ. ಈಗಲೇ ಹಿಂಗಿದ್ರೆ ಮುಂದೆ ಇನ್ನೇನಾಗತೋ ಅನ್ನೋ ಹಿಂದಿನ ಪೀಳಿಗೆಯ ಮೌನ ಪ್ರಶ್ನೆಗೆ ಮಿನುಗೋ ಕಣ್ಣಲ್ಲಿ ಮಿನುಕು ನಗೆಬಿರೊ ನವಪೀಳಿಗೆಯ ಮೌನ ಉತ್ತರ.

ಏನೇಯಾಗ್ಲಿ  ನಮ್ಮ ಮಣ್ಣಿನ ಸತ್ವದ ಶಕ್ತಿ ಮೆಚ್ಲೇಬೇಕು.  ಆಧುನಿಕತೆಯ ಮೋಡಿ , ಆವಿಷ್ಕಾರಗಳ ಅಪ್ಪುಗೆ, ಆತಂಕ, ಆವೇಗ ಎಲ್ಲಾ ತುಂಬಿರೋ ಬದುಕು ಇದು. ಆದರೂ ಜನದ ಮನದ ಮೂಲೇಲಿ ಶ್ರೀಮಂತ ಪರಂಪರೆಯ, ಸನಾತನ ಸತ್ವಕ್ಕೂ ಮಹತ್ವವಿದೆ. ಬರಿ ದಿನದ ಬರಿದಾದ ಬದುಕು ಹೇಗೆ ಇರಲಿ, ಹಬ್ಬದ ದಿನ ಬರ ಕಳೆದ ಭೂಮಿ ಆಗತ್ತೆ ಹೃದಯ. ಭಾರತೀಯತೆ ಜಾಗೃತವಾಗತ್ತೆ. ಭಾವ ಬೆಸುಗೆಗೆ ಹಾತೊರೆಯುತ್ತೆ. ಬಾಂಧವ್ಯದ ಬಯಕೆ ಭೋರ್ಘರೆಯುತ್ತೆ . ಬಟ್ಟೆ ಮಾತ್ರ ಹೊಸದಲ್ಲ ಬಟ್ಟೆಯೊಳಗಿನ ಭಾವ ಕೂಡ ಹೊಸದು.

ಕಬ್ಬಿನ ಹಬ್ಬದ ಕಬ್ಬ ಬರೆಯೋ ಕಾಲ ಇದು. ಮಹತ್ವದ transition period. ಒಂದರ್ಥದಲ್ಲಿ negativeನಿಂದ positive ಕಡೆಗೆ. ಕತ್ತಲಿಂದ ಬೆಳಕಿನಕಡೆಗೆ. ತಮೋ ಇಂದ ಸಾತ್ವಿಕದ ಕಡೆಗೆ.

Generally ಈ ಹಬ್ಬನ ಸುಗ್ಗಿ ಹಬ್ಬ ಅಂತಾರೆ. ವರ್ಷ ಪೂರ್ತಿ ಬೆವರಿಳಿಸಿ ಭೂತಾಯಿಯ ಮಡಿಲಲ್ಲಿ ಸವೆಸಿದ ಜೀವನ ಫಲ ನಿಡುಕ ಕಾಲ ಇದು. ಅನ್ನದಾತನ ಮೊಗದಲ್ಲಿ ನಗು ಮೂಡೋ  ಕಾಲ ಇದು. ಪ್ರತಿದಿನ ಅನ್ನದಾತನ ಋಣದಲ್ಲಿರೋ ನಾವು ಆತನಿಗೆ ಮನಸಾರೆ ಕೃತಜ್ಞತೆ ತಿಳಿಸೋ ಕಾಲ ಇದು.

ಹೇಮಂತದ ಕೊರೆವ ಛಳಿಗೆ ದೇಹದ ಒಳಹೂರಗಾಗೋ ಬದಲಾವಣೆ ಮತ್ತು ವ್ಯತ್ಯಾಸಗಳನ್ನ ಸರಿದೂಗಿಸಿ ನವ ಚೈತನ್ಯ ತುಂಬಾ ಕಾಲವಿದು. ಈ ಹಬ್ಬದಲ್ಲಿ ತುಂಬಾ demand ಇರೋದು ಎಳ್ಳು ಬೆಲ್ಲಕ್ಕೆ.   ವರ್ಷಕ್ಕೊಂದು  ಸಾರಿ ಮಾಡೋ ಇದಕ್ಕೆ ವರ್ಷ ಪೂರ್ತಿ ಕಾಯ್ತಿವಿ. ಹೇಗೆ ಮಾಡಿದರು ಅದಕ್ಕೆ ಅದರದೇ ರುಚಿ ಅದರದೇ ಸವಿ. ಹಾಗಂತ ಇದು  ಬರಿ ಬಾಯಾಡಿಸೋ matter ಅಲ್ಲ.  Health & beauty conscious ಇರುವವರಿಗೆ ಎಳ್ಳು ಬೆಲ್ಲ ಈ ಕಾಲಕ್ಕೆ ಹೇಳಿ ಮಾಡಿಸಿದ ಔಷಧ . ಹಾಗಂತ ಹೊಟ್ಟೆಬಿರಿಯ ತಿನ್ನಕ್ಕಾಗಲ್ಲ. ನೆನಪಿರಲಿ, ಹೆಚ್ಚಾದ್ರೆ ಅಮೃತಾನು ವಿಷ ಆಗತ್ತೆ..

ಹಬ್ಬದಲ್ಲಿ ಅರಿಶಿನದ ಪ್ರಾಮುಖ್ಯತೆ ಮರೆಯೋಹಾಗಿಲ್ಲ. ಬೊಗಸೆ ತುಂಬಾ ಅರಿಶಿನ ನೀಡಿ ಮುತೈದೆ ಭಾಗ್ಯ ಬೇಡೋ ಪರಿ ಒಂದೆಡೆ ಆದ್ರೆ, ರಾಸುಗಳ ಮೈತುಂಬ ಅರಿಶಿನ ಹಚ್ಚಿ ಹಸಿ ಮೈಯ್ಯ ನವವಧುವಿನಂತೆ ಅಲಂಕರಿಸೋದು ಇನ್ನೊಂದೆಡೆ. ಅರಿಶಿನದ ಗುಣ ಅಪಾರ. ಪರಪ್ಪರಿ ಫಲ ಕೊಡುವ ದಿವ್ಯ ದ್ರವ್ಯ ಇದು.

ಹೆಸರುಬೇಳೆ, ಅಕ್ಕಿ, ತುಪ್ಪ, ಬೆಲ್ಲ ಈ combinationನಲ್ಲಿ ತಯಾರಾಗೋ ಎಲ್ಲಾ ಭೋಜ್ಯ ವಸ್ತು ಅಬ್ಬಾ! ಅದೆಂತ ರುಚಿರೀ!! ಅಷ್ಟೇ ಅಲ್ಲ. ಆ ಪದಾರ್ಥದ ತುಂಬಿರುವ medicinal ಗುಣ ಮೆಚ್ಚಲೇಬೇಕು . “ಸುಗ್ಗಿ, ಸೋನೇ” ಇದು ಪಕ್ಕಾ country ಪದ ನಿಜ. ನಿಜ ಹೇಳಬೇಕಂದ್ರೆ ನಮ್ಮ ಬದುಕಲ್ಲಿ ಬೆಸದಿರು ಜೀವ ನುಡಿ ಇದು. ಭೂತಾಯಿಯ ಮಡಿಲಿಂದ ಇಳಿದು ಬರುವ ಹಾರೈಕೆಯ ಮಳೆ ಇದು. ಜೀವ ಸಂಕುಲದ ಜೀವ ಹುರುಪಿಗೆ ಹೇತು ಇದು. ಜಾಡ್ಯ ಕಳೆದು ಉಲ್ಲಾಸ ತುಂಬೋ ಸುಗ್ಗಿ ಹಬ್ಬ.

ಪ್ರಾಚೀನರ ಚಿಂತನೆ ಪದ್ಧತಿ ಎಷ್ಟು ಅಪ್ಯಾಯ ಅಲ್ವ!!!ಅವರು ಬರಿ ಹೇಳಿ ಹೋಗಲಿಲ್ಲ. ಮಾಡಿ ಮಡಿದ ಮಹಾನುಭಾವರು. A good  example to the best sermon ಅಂಥಾ ಇದಕ್ಕೆ ಹೇಳೋದು.

“ಸಂಕ್ರಾಂತಿ” ಬಾಂಧವ್ಯ ಬಲಪಡಿಸುವ, ಸ್ನೇಹ ಬೆಳೆಸುವ, ಭಾವ ಬೆಸುಗೆಗಳ ಅಡಿಪಾಯ ಗಟ್ಟಿ ಮಾಡೋ ಹಬ್ಬ. Some ಕ್ರಾಂತಿ ನಮ್ಮೊಳಗೂ ಆಗಲೇಬೇಕು. ಆಗಾಗ ಕೆಲವೊಂದರಲ್ಲಿ revolutionize ಆದ್ರೆ ಬದುಕು ಹಗುರ ಆಗತ್ತೆ.

ಹುಂ ಅಂತೀರೋ ಉಹುಂ ಅಂತೀರೋ…… ಅದು ನಿಮಗೆ ಬಿಟ್ಟಿದ್ದು.

ಏನೇ ಆಗಲಿ, ನನ್ನ ಕಡೆಯಿಂದ ತಮಗೆಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳು.

ಎಳ್ಳು ಬಿಲ್ಲ ತಿನ್ನಿ ಒಳ್ಳಿ ಮಾತಾಡಿ*.

ಲೇಖಕಿ  – ದೀಪಿಕಾ ಪಾಂಡುರಂಗಿ 

Also Read :

 

Leave a Reply

satta king tw