Kumari Pooja

Kumari Pooja

ಕುಮಾರಿಪೂಜಾ ಮಹತ್ವ -1

ಆಶ್ವೀನಮಾಸದನವರಾತ್ರಿ ಉತ್ಸವ ದಲ್ಲಿ ಪ್ರತಿದಿನ ಎರಡು ವರ್ಷದಿಂದ ಹತ್ತುವರ್ಷದವರೆಗಿನ ಕುಮಾರಿಯರಿಗೆ ಗಂಧ ,ಪುಷ್ಪ ಫಲಾದಿಗಳನ್ನು ಕೂಟ್ಟು ,ಅವರು ಸಂತೋಷಪಡುವ ಹಾಡುಗಳನ್ನು ಹೇಳಿ ಅವರನ್ನು ಹಾಡುಗಳನ್ನು ಹೇಳಿ ಪೂಜಿಸಬೇಕು

ಗಂಧಪುಷ್ಪಫಲಾಧೀನಾಂ ಪ್ರೀತಿಸ್ತವನಪೂರ್ವಕಂ
ದ್ವಿವರ್ಷಕನ್ಯಾರಭ್ಯ ದಶವರ್ಷಾವಧಿ ಕ್ಷಮಾತ್ ಪೂಜಯೇತ್|

ಈ ಕುಮಾರಿಯನ್ನು ಕ್ರಮವಾಗಿ ಕುಮಾರೀ , ತ್ರಿಮೂರ್ತಿನೀ , ಕಲ್ಯಾಣಿ , ರೋಹಿಣೀ , ಕಾಲೀ , ಚಂಡಿಕಾ , ಶಾಂಭವೀ , ದುರ್ಗಾ, ಭದ್ರಾ ಎಂದು ಕರೆಯಲಾಗಿದೆ . ಈ ಹೆಸರಿನ ದೇವಿಯನ್ನು ಎರಡು ವರ್ಷದಿಂದ ಹತ್ತು ವರ್ಷದ ಕುಮಾರಿಯರಲ್ಲಿ ಆವಾಹಿಸಿ ಪೂಜಿಸಬೇಕು. ಭಕ್ಷ್ಯಾದಿಗಳಿಂದ ತೃಪ್ತಿಪಡಿಸಬೇಕು. ಅಲಂಕಾರಾದಿ ವಸ್ತುಗಳನ್ನು ಕುಮಾರಿಯರಿಗೆ ನೀಡಬೇಕು. ಇದರಿಂದ ಆಯುಷ್ಯಾದಿಗಳು ಅಭಿವೃದ್ಧಿಯಾಗುವವು. ಕುಮಾರೀ ಪೂಜೆಯಿಂದ ಅಷ್ಟವಸುಗಳು , ರುದ್ರಾದಿಗಳನ್ನು ಪೂಜಿಸಿದಂತಾಗುತ್ತದೆ

ಪಿತರೋ ವಸವೋ ರುದ್ರಾ ಆದಿತ್ಯಾ ಗಣಲೋಕಪಾಃ |
ಸರ್ವೇ ತೇ ಪೂಜಿತಾಸ್ತೇನ ಕುಮಾರ್ಯೋ ಯೇನ ಪೂಜಿತಾಃ ||

ನವರಾತ್ರಿಯಲ್ಲಿ ಕಡೇಪಕ್ಷ ಒಬ್ಬ ಕನ್ಯೆಯನ್ನು ಪೂಜಿಸಿದರೂ , ಊಟವನ್ನು ಮಾಡಿಸಿದರೂ, ತಿಂಡಿ, ತಿನಿಸು , ಭಕ್ಷ್ಯ ಭೋಜ್ಯಾದಿಗಳನ್ನು ನೀಡಿದರೂ ಐಶ್ವರ್ಯಾದಿಗಳನ್ನು ಹೊಂದಬಹುದು.

ಏಕಾಂ ಕನ್ಯಾಂ ಭೋಜಯಿತ್ವಾ ಐಶ್ವರ್ಯಂ ಲಭತೇ ನರಃ ||

ನವರಾತ್ರಿಯಲ್ಲಿ ಒಂಬತ್ತು ದಿವಸಗಳಲ್ಲಿ ಪೂಜಿಸಲು ಅಸಾಧ್ಯವಾದರೆ ಮೂರು, ಐದು, ಏಳು ದಿವಸಗಳಲ್ಲೂ ಪೂಜಿಸಬಹುದು. ಇದನ್ನೇ ತ್ರೀರಾತ್ರೋತ್ಸವ , ಪಂಚ ರಾತ್ರೋತ್ಸವ , ಸಪ್ತರಾತ್ರೋತ್ಸವ ಎನ್ನಲಾಗಿದೆ.

ಕುಮಾರಿ ಪೂಜಾ ಮಹತ್ವ -ನವರಾತ್ರಿಯಲ್ಲಿ ಕುಮಾರಿ ಪೂಜಾಫಲ:

1) ಎರಡು ವರ್ಷದ ಕನ್ಯೆಗೆ ‘ಕುಮಾರಿಕೆ’ ಎಂದು ಹೆಸರು ಇವಳನ್ನು ಪೂಜಿಸುವುಧರಿಂದ ದುಃಖ ದಾರಿದ್ರ್ಯ ನಾಶ ಆಯುಷ್ಯ ಬಲಗಳ ವೃದ್ಧಿಯಾಗುವುದು.

2) ಮೂರು ವರ್ಷಗಳ ಕನ್ಯೆಗೆ ‘ತ್ರಿಮೂರ್ತೀನಿ’ ಎಂದು ಹೆಸರು ಇವಳ ಪೂಜಿಸುವುದರಿಂದ ಆಯುವೃದ್ಧಿ ವ್ಯಾಧಿಪೀಡಪರಿಹಾರ ಧುಃಖಗಳ ನಿವರಣೆಯಾಗುವುದು .

3) ನಾಲ್ಕುವರ್ಷಗಳ ಕನ್ಯೆಗೆ. ‘ಕಲ್ಯಾಣಿ’ ಎಂದು ಹೆಸರು ಇವಳ ಪೂಜೆ ಯಿಂದ ಸೌಖ್ಯ ಧನ ಧನ ಧಾನ್ಯ ಪುತ್ರ ಪೌತ್ರಾಭಿ ವೃದ್ಧಿಯಾಗುತ್ತದೆ

4) ಐದು ವರ್ಷಗಳ ಕನ್ಯೆಗೆ ‘ರೋಹಿಣಿ’ ಎಂದು ಹೆಸರು ಇವಳ ಪೂಜೆ ಯಿಂದ ಆರೋಗ್ಯ, ಸುಖ ಧನ ಯಶಸ್ಸುಲಭಿಸುತ್ತದೆ

5) ಆರು ವರ್ಷಗಳ ಕನ್ಯೆಗೆ ‘ಕಾಲಿಕಾ’ ಎಂದು ಹೆಸರು ವಿದ್ಯಾ ಜಯ ರಾಜ್ಯಾಲಾಭ ಶತ್ರುನಾಶವಾಗುತ್ತದೆ

6) ಏಳು ವರ್ಷಗಳ ಕನ್ಯೆಗೆ ‘ಚಂಡಿಕಾ’ ಎಂದು ಹೆಸರು ಇವಳ ಪೂಜೆ ಯಿಂದ ಸಂಗ್ರಮದಲ್ಲಿ ಜಯ ದುಃಖ ದಾರಿದ್ರ್ಯನಾಶ

7) ಎಂಟು ವರ್ಷಗಳ ಕನ್ಯೆಗೆ ‘ಶಾಂಭವಿ’ ಎಂದು ಹೆಸರು ಇವಳ ಪೂಜೆ ಯಿಂದ ಮ಼ಹಾಪಾಪನಾಶ ಉಗ್ರಕಾರ್ಯಸಾಧನೆ ಯಾಗುತ್ತದೆ

8) ಒಂಬತ್ತು ವರ್ಷಗಳ ಕನ್ಯೆಗೆ ‘ದುರ್ಗಾ’ ಎಂದು ಹೆಸರು ಇವಳ ಪೂಜೆಯಿಂದ ಜ್ಞಾನಪ್ರಾಪ್ತಿ ದುರ್ಗತಿ ನಾಶ, ಸೌಭಾಗ್ಯ. ಧನ ,ಧಾನ್ಯ , ಇಷ್ಟಾರ್ಥಗಳಪ್ರಾಪ್ತಿಯಾಗುತ್ತದೆ

9) ಹತ್ತು ವರ್ಷಗಳ ಕನ್ಯೆಗೆ ‘ಸುಭದ್ರಾ’ ಎಂದು ಹೆಸರು ಇವಳ ಪೂಜೆ ಯಿಂದ ದಾಸ ದಾಸಿಯರ ಹೆಚ್ಚಳವಾಗುತ್ತದೆ.

ಕುಮಾರಿ ಪೂಜಾ ಮಂತ್ರಗಳು:

1. ಜಗತ್ಪೂಜ್ಯೇ ಸರ್ವ ವಂದ್ಯೇ ಸರ್ವ ಶಕ್ತಿ ಸ್ವರೂಪಿಣೀ |
ಪೂಜಾಂ ಗೃಹಾಣ ಕೌಮಾರಿ ಜಗನ್ಮಾತರ್ನಮೋಸ್ತುತೇ ||

2. ತ್ರಿಪುರಾಂ ತ್ರಿಪುರಧಾರಾಂ ತ್ರಿವರ್ಗ ಜ್ಞಾನರೂಪಿಣಿಂ |
ತ್ರೈಲೋಕ್ಯ ವಂದಿತಾಂ ದೇವೀಂ ತ್ರಿಮೂರ್ತಿಂ ಪೂಜಯಾಮ್ಯಹಂ ||

3. ಕಾಲಾತ್ಮಿಕಾಂ ಕಲಾತೀತಾಂ ಕಾರುಣ್ಯಹೃದಯಾಂ ಶಿವಾಂ |
ಕಲ್ಯಾಣ ಜನನೀಂ ನಿತ್ಯಂ ಕಲ್ಯಾಣೀಂ ಪೂಜಯಾಮ್ಯಹಂ ||

4. ಅಣಿಮಾದಿ ಗುಣಾಧಾರಾಮ ಕಾರಾಧ್ಯಕ್ಷರಾತ್ಮಿಕಾಂ |
ಅನಂತ ಶಕ್ತಿಕಾಂ ಲಕ್ಷ್ಮೀಂ ರೋಹಿಣಿಂ ಪೂಜಯಾಮ್ಯಹಂ ||

5. ಕಾಮಚಾರೀಂ ಶುಭಾಂ ಕಾಂತಾಂ ಕಾಲಚಕ್ರ ಸ್ವರೂಪಿಣೀಂ |
ಕಾಮದಾಂ ಕರುಣೋದಾರಂ ಕಾಲೀಂ ಸಂಪೂಜಯಾಮ್ಯಹಂ ||

6. ಚಂಡಾಚಾರಂ ಚಂಡಮಾಯಾಂ ಚಂಡಮುಂಡ ಪ್ರಭಂಜನೀಂ |
ಪೂಜಯಾಮಿ ಸದಾ ದೇವೀಂ ಚಂಡಿಕಾಂ ಚಂಡವಿಕ್ರಮಾಂ ||

7. ಸದಾನಂದಕರೀಂ ಶಾಂತಾಂ ಸರ್ವ ದೇವ ನಮಸ್ಕೃತಾಂ |
ಸರ್ವ ಭೂತಾತ್ಮಿಕಾಂ ಲಕ್ಷ್ಮೀಂ ಶಾಂಭವೀಂ ಪೂಜಯಾಮ್ಯಹಂ ||

8. ದುರ್ಗಮೇ ದುಸ್ತರೇ ಕಾರ್ಯೇ ಭವದುಃಖವಿನಾಶಿನೀಂ|
ಪೂಜಯಾಮಿ ಸದಾ ಭಕ್ತ್ಯಾ ದುರ್ಗಾಂ ದುರ್ಗಾರ್ತಿಹಾರಿಣೀಂ ||

9. ಸುಂದರೀಂಸ್ವರ್ಣವರ್ಣಾಭಾಂ ಸುಖಸೌಖ್ಯ ಪ್ರದಾಯಿನೀಂ |
ಸುಭದ್ರಜನನೀಂ ದೇವೀಂ ಸುಭದ್ರಾಂ ಪೂಜಯಾಮ್ಯಹಮ್ ||

ಮೇಲೆ ತಿಳಿಸಿದಂತೆ ಮನುಷ್ಯರು ಕುಮಾರೀ ಪೂಜೆಯನ್ನು ವಿಧಿಪೂರ್ವಕವಾಗಿ ಆಚರಿಸಬೇಕು.

|| ಕುಮಾರಿಪೂಜೆಯ ಮಹತ್ವ ಮುಗಿಯಿತು||

ಕೃಪೆ:ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
ಫೋಟೋ ಕೃಪೆ:Drikpanchanga website

|| ನಾಹಂ ಕರ್ತಾ ಹರಿಃ ಕರ್ತಾ ||
|| ಶ್ರೀಗುರ್ವಂತರ್ಗತ ಶ್ರೀಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಹಯಗ್ರೀವಾರ್ಪಣಮಸ್ತು ||

By R J Prasad

Also Read

Leave a Reply

satta king tw